ತ್ಯೂರಿಹ್ಯೌ ಜಲಪಾತವು ಭಾರತದ ಮಿಝೋರಂ ರಾಜ್ಯದಲ್ಲಿನ ಸೆರ್ಛಿಪ್ ಜಿಲ್ಲೆಯ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. == ಜಲಪಾತ == ತ್ಯೂರಿಹ್ಯೂ ಜಲಪಾತ ಖಾವ್‍ಥ್ಲಾ ಅಥವಾ ತ್ಯೂರಿಹ್ಯೌ ಜಲಪಾತವು ಮಿಜ಼ೋರಮ್‍ನ ಅತ್ಯಂತ ವೇಗವಾಗಿ ಹರಿಯುವ ನದಿಗಳಲ್ಲಿನ ಎಲ್ಲ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತ್ಯಂತ ನಯನಮನೋಹರವಾದ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ ಇದನ್ನು ಹಿಂಬದಿಯಿಂದ ನೋಡಬಹುದು ಏಕೆಂದರೆ ಜಲಪಾತದ ಹಿಂಬದಿಯಲ್ಲಿ ಒಂದು ಗುಹೆಗಳಿವೆ. ಜಲಪಾತವು ಗುಹೆಗಳ ಮೇಲೆ ಕಮಾನಿನಂತೆ ಧುಮುಕುತ್ತದೆ.. == ಉಲ್ಲೇಖಗಳು ==